ಸೆಪ್ಟೆಂಬರ್ ೧೮ರಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ೧೩೨ನೇ ಬ್ಯಾಂಕರುಗಳ ಸಮಾವೇಶ ನಡೆಯಿತು. ಇದನ್ನು ಉದ್ಘಾಟಿಸುತ್ತ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅತ್ಯಂತ ಪ್ರಮುಖ ವಿಷಯವೊಂದನ್ನು ಪ್ರಸ್ತಾಪಿಸಿದ್ದಾರೆ. ಬ್ಯಾಂಕಿಂಗ್ ಕ್ಷೇತ್ರದ ಪ್ರಮುಖರು ಪಾಲ್ಗೊಂಡಿದ್ದ ಈ ಸಭೆಯಲ್ಲಿ ಸಿದ್ಧರಾಮಯ್ಯನವರು ಮಾತನಾಡುತ್ತ ಬ್ಯಾಂಕುಗಳು ತ್ರಿಭಾಷಾ ಸೂತ್ರವನ್ನು ಪಾಲಿಸುತ್ತಿಲ್ಲ, ಕನ್ನಡವನ್ನು ಅವಗಣನೆ ಮಾಡುತ್ತಿವೆ. ಕನ್ನಡ ಬಲ್ಲವರನ್ನು ಉದ್ಯೋಗಕ್ಕೆ ತೆಗೆದುಕೊಳ್ಳುತ್ತಿಲ್ಲ. ಬ್ಯಾಂಕುಗಳ ಈ ನೀತಿಯನ್ನು ಒಪ್ಪಲು ಸಾಧ್ಯವಿಲ್ಲ. ಕನ್ನಡ ಬಳಕೆಗೆ ಬ್ಯಾಂಕುಗಳು ಮುಂದಾಗಬೇಕು, ಕನ್ನಡ ಬಲ್ಲವರನ್ನು ಉದ್ಯೋಗಕ್ಕೆ ತೆಗೆದುಕೊಳ್ಳಬೇಕು ಎಂದು ಬ್ಯಾಂಕುಗಳ ಕನ್ನಡ ವಿರೋಧಿ ನೀತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬ್ಯಾಂಕುಗಳ ಚಲನ್‌ಗಳು, ಪಾಸ್ ಬುಕ್‌ಗಳು, ಸಾಲ ಅರ್ಜಿಗಳು, ಖಾತೆ ತೆರೆಯುವ ಮಾಹಿತಿ ನಮೂನೆಗಳು, ಎಲ್ಲ ಬಗೆಯ ಠೇವಣಿ ಪ್ರಮಾಣಪತ್ರಗಳನ್ನು ತಯಾರುಮಾಡುವಾಗ ತ್ರಿಭಾಷಾ ಸೂತ್ರವನ್ನು ಪಾಲಿಸುತ್ತಿಲ್ಲ. ಹೀಗಾಗಿಯೇ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಸ್ಥಳೀಯ ಬ್ಯಾಂಕುಗಳು ನಾಗರಿಕರಿಗೆ ನೀಡಬೇಕಾದ ಸೌಲಭ್ಯಗಳು ಹಳ್ಳಿಗರನ್ನು ತಲುಪುತ್ತಿಲ್ಲ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.
ಸಿದ್ಧರಾಮಯ್ಯನವರ ಹೇಳಿಕೆಯ ಕೊನೆಯ ಭಾಗವನ್ನು ಗಂಭೀರವಾಗಿ ಗಮನಿಸಿ. ಬ್ಯಾಂಕುಗಳು ಕನ್ನಡವನ್ನು ಬಳಸದೇ ಇರುವುದರಿಂದಲೇ ಸಾಲವೂ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳು ಗ್ರಾಮೀಣ ಜನತೆಯನ್ನು ತಲುಪುತ್ತಿಲ್ಲ. ಈ ಮಹತ್ವದ ಸತ್ಯ ಅಧಿಕಾರ ಸ್ಥಾನದಲ್ಲಿ ಕುಳಿತವರಿಗೆ ಕಡೆಗೂ ಅರ್ಥವಾಗುತ್ತಿರುವುದು ಸಮಾಧಾನದ ವಿಷಯ. ಆದರೆ ಬ್ಯಾಂಕರುಗಳನ್ನು ಯಾವುದೋ ಒಂದು ಸಮಾವೇಶದಲ್ಲಿ ತರಾಟೆ ತೆಗೆದುಕೊಂಡುಬಿಟ್ಟರೆ ಸಾಕೆ? ಅದಕ್ಕಿಂತ ಹೆಚ್ಚಿನ ಕ್ರಿಯಾತ್ಮಕ ನಡೆಗಳು ಸರ್ಕಾರದಿಂದ ಆಗಬಾರದೇ?
ಭಾಷೆ ಮತ್ತು ಬದುಕು ಒಂದಕ್ಕೊಂದು ಹೆಣೆದುಕೊಂಡೇ ಇರುತ್ತವೆ. ಒಂದರಿಂದ ಒಂದನ್ನು ಪ್ರತ್ಯೇಕಿಸಿ ನೋಡಲಾಗದು. ಭಾಷೆಯ ವಿಷಯ ಮಾತನಾಡಿದಾಗೆಲ್ಲ ‘ಅದು ಸಂವಹನದ ಒಂದು ಮಾಧ್ಯಮ ಅಷ್ಟೇ’ ಎಂದು ಮೂಗುಮುರಿಯುವರಿದ್ದಾರೆ. ನಮ್ಮ ಕೆಲವು ಬುದ್ಧಿಜೀವಿಗಳಿಗೆ ಭಾಷಾ ಹೋರಾಟದ ಮಹತ್ವವೂ ಅರ್ಥವಾಗುವುದಿಲ್ಲ, ಭಾಷಾ ಚಳವಳಿಗಳ ಬಗ್ಗೆ ಸಿನಿಕರಾಗಿ ಪ್ರತಿಕ್ರಿಯಿಸಿಬಿಡುತ್ತಾರೆ. ಭಾಷೆ ಮತ್ತು ಬದುಕು ನಡುವೆ ಇರುವ ಬಂಧವನ್ನು ಅವರೂ ಸಹ ಅರ್ಥ ಮಾಡಿಕೊಂಡಿಲ್ಲ.
ಬ್ಯಾಂಕುಗಳ ಚಲನ್‌ಗಳು, ಪಾಸ್ ಬುಕ್‌ಗಳು, ಚೆಕ್ ಪುಸ್ತಕಗಳು, ಅರ್ಜಿಗಳು ಎಲ್ಲವೂ ಇಂಗ್ಲಿಷ್ ಮತ್ತು ಹಿಂದಿಯಲ್ಲಿದ್ದರೆ ನಮ್ಮ ಗ್ರಾಮೀಣ ಭಾಗದ ಜನತೆ ಅಲ್ಲಿಗೆ ಹೋಗಿ ವ್ಯವಹರಿಸಲು ಸಾಧ್ಯವೇ? ತಮ್ಮ ಅನುಕೂಲಕ್ಕಾಗಿ ರಾಜ್ಯ, ಕೇಂದ್ರ ಸರ್ಕಾರಗಳು ಆರಂಭಿಸಿರುವ ಯೋಜನೆಗಳನ್ನು ಬಳಸಿಕೊಳ್ಳಲು ಸಾಧ್ಯವೇ? ಅರ್ಜಿ ನಮೂನೆಗಳಿಗೆ ಸಹಿ ಹಾಕುವಾಗ, ಅಲ್ಲಿ ಬರೆದಿರುವ ವಿಷಯವಾದರೂ ಏನು? ಬ್ಯಾಂಕುಗಳು ವಿಧಿಸುವ ಕಟ್ಟಳೆಗಳು ಏನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ?
ಅಷ್ಟಕ್ಕೂ ನಮ್ಮ ಬ್ಯಾಂಕುಗಳಲ್ಲಿ ಎಲ್ಲ ವ್ಯವಹಾರಗಳನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಷ್ಟೇ ಯಾಕೆ ಮಾಡಲಾಗುತ್ತದೆ? ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ (ತಮಿಳುನಾಡು ಹೊರತುಪಡಿಸಿ) ತ್ರಿಭಾಷಾ ಸೂತ್ರವನ್ನು ಪಾಲಿಸಬೇಕು ಎಂದು ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಕಟ್ಟಪ್ಪಣೆ ಮಾಡಿದೆ. ಆದರೆ ಇದನ್ನು ಯಾಕೆ ಪಾಲಿಸಲಾಗುತ್ತಿಲ್ಲ?
ಎಟಿಎಂಗೆ ಹೋದಾಗ ನಿಮಗೆ ಅನುಭವವಾಗಿರಬಹುದು. ಅಲ್ಲಿ ಮಾನಿಟರ್ ಮೇಲೆ ಕನ್ನಡ ಮತ್ತು ಹಿಂದಿ ಭಾಷೆಯ ಮಾರ್ಗದರ್ಶನ ಮಾತ್ರ ಇರುತ್ತದೆ. ಕನ್ನಡದ ಆಯ್ಕೆಯೂ ಇರುವುದಿಲ್ಲ. ಕನ್ನಡ ಗ್ರಾಹಕರು ಮೇಲಿಂದ ಮೇಲೆ ಪ್ರತಿಭಟನೆ ನಡೆಸಿದ ಮೇಲೆ ಕೆಲವು ಬ್ಯಾಂಕುಗಳಲ್ಲಿ ಕನ್ನಡದ ಆಯ್ಕೆಯನ್ನು ಸೇರಿಸಲಾಗಿದೆ. ಇನ್ನುಳಿದ ಬ್ಯಾಂಕ್ ಎಟಿಎಂಗಳಲ್ಲಿ ಇನ್ನೂ ಇಂಗ್ಲಿಷ್ ಮತ್ತು ಹಿಂದಿ ಮಾತ್ರ ಉಳಿದುಕೊಂಡಿದೆ. ಇಂಥ ಎಟಿಎಂಗಳಲ್ಲಿ ಕೇವಲ ಕನ್ನಡವನ್ನು ಬಲ್ಲ ಗ್ರಾಹಕ ಹೋಗಿ ವ್ಯವಹರಿಸಲು ಸಾಧ್ಯವೇ?
ಬ್ಯಾಂಕಿಂಗ್ ಕ್ಷೇತ್ರಕ್ಕೆ ಕರ್ನಾಟಕದ ಕೊಡುಗೆ ದೊಡ್ಡದು. ಕರ್ನಾಟಕ ಬ್ಯಾಂಕ್, ವಿಜಯ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸಿಂಡಿಕೇಟ್ ಬ್ಯಾಂಕ್ ಹೀಗೆ ಹಲವಾರು ಬ್ಯಾಂಕುಗಳನ್ನು ದೇಶಕ್ಕೆ ನೀಡಿದ ಹೆಮ್ಮೆ ನಮ್ಮದು. ಈ ಪೈಕಿ ಬಹುತೇಕ ಬ್ಯಾಂಕುಗಳು ಹುಟ್ಟಿಕೊಂಡಿದ್ದು ಕರ್ನಾಟಕದ ಕರಾವಳಿಯಲ್ಲಿ. ಆದರೆ ದುರದೃಷ್ಟವೆಂದರೆ ನಮ್ಮ ನೆಲದಲ್ಲಿ ಹುಟ್ಟಿದ ಬ್ಯಾಂಕುಗಳಲ್ಲೇ ಈಗ ಕನ್ನಡವಿಲ್ಲದಂತಾಗಿದೆ. ಇದಕ್ಕೇನು ಮಾಡೋದು? ಈ ಬ್ಯಾಂಕುಗಳಲ್ಲೇ ಕನ್ನಡ ಒಂದಕ್ಷರವೂ ಬಾರದ ಉದ್ಯೋಗಿಗಳನ್ನು ಸೇರಿಸಿಕೊಳ್ಳಲಾಗುತ್ತಿದೆ. ಇಂಥವರ ಜತೆ ಒಂದೇ ಹಿಂದಿಯಲ್ಲಿ ಮಾತನಾಡಬೇಕು ಅಥವಾ ಇಂಗ್ಲಿಷ್‌ನಲ್ಲಿ ಮಾತನಾಡಬೇಕು. ಎರಡೂ ಭಾಷೆ ಬಾರದ ಕನ್ನಡಿಗರೇನು ಮಾಡಬೇಕು?
ಕನ್ನಡವನ್ನೇ ಕರ್ನಾಟಕದಿಂದ ಓಡಿಸುವ ಈ ಹುನ್ನಾರವನ್ನೇ ನಾವು ಹಿಂದಿ ಹೇರಿಕೆಯೆಂದು ಕರೆಯುತ್ತೇವೆ. ಸಂವಿಧಾನದ ಆರ್ಟಿಕಲ್ ೩೪೩ರಿಂದ ೩೫೧ರವರೆಗಿನ ನಿಯಮಗಳಲ್ಲಿ ಕೇಂದ್ರ ಸರ್ಕಾರ ತನ್ನ ಆಡಳಿತ ಭಾಷೆಯ ಕುರಿತು ವಿವರ ನೀಡಿದೆ. ಕೇಂದ್ರ ಸರ್ಕಾರದ ಆಡಳಿತ ಭಾಷೆಯನ್ನಾಗಿ ಇಂಗ್ಲಿಷ್ ಮತ್ತು ಹಿಂದಿಯನ್ನಾಗಿ ಭಾರತ ಸಂವಿಧಾನವೇ ಒಪ್ಪಿಕೊಂಡಿದೆ. ಅದರಲ್ಲೂ ಇಂಗ್ಲಿಷನ್ನೂ ಕಿತ್ತುಹಾಕಿ ಹಿಂದಿಯೊಂದನ್ನೇ ಆಡಳಿತ ಭಾಷೆ ಮಾಡುವ ಕುತಂತ್ರಗಳು ೧೯೬೫ರಲ್ಲಿ ವಿಫಲಗೊಂಡ ನಂತರ ಹಿಂದಿಯೇತರರ ಅನುಕೂಲಕ್ಕಾಗಿ ಇಂಗ್ಲಿಷ್ ಭಾಷೆಯೂ ಉಳಿದುಕೊಂಡಿದೆ. ಅದರ ನೇರ ಪರಿಣಾಮ ಹಿಂದಿಯೇತರ ಭಾಷೆಗಳನ್ನು ಆಡಳಿತ ಭಾಷೆಗಳನ್ನಾಗಿ ಹೊಂದಿರುವ ರಾಜ್ಯಗಳಿಗೆ ಆಗುತ್ತಿದೆ. ಹಿಂದಿಯೇತರ ರಾಜ್ಯಗಳಲ್ಲಿ ತ್ರಿಭಾಷಾ ಸೂತ್ರದಂತೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ಜತೆ ಆಯಾ ಪ್ರಾದೇಶಿಕ ಭಾಷೆಗಳನ್ನು ಬಳಸಬೇಕಾಗುತ್ತದೆ. ಆದರೆ ಪ್ರಾದೇಶಿಕ ಭಾಷೆಗಳ ಬಗ್ಗೆ ಮೊದಲಿನಿಂದಲೂ ಕೇಂದ್ರ ಸರ್ಕಾರ ಹೊಂದಿರುವ ಅಸಡ್ಡೆಯಿಂದಾಗಿ ಅದರ ಅಧೀನದಲ್ಲಿರುವ ಬ್ಯಾಂಕು, ತೆರಿಗೆ ಇಲಾಖೆ, ಅಂಚೆ ಇಲಾಖೆ, ರೈಲ್ವೆ ಇಲಾಖೆ, ವಿಮೆ, ಪಿಂಚಣಿ, ಹೆದ್ದಾರಿ, ವಿಮಾನಸೇವೆ ಹೀಗೆ ಹತ್ತು ಹಲವು ವಲಯಗಳಲ್ಲಿ ಇವತ್ತು ಹಿಂದಿ ಮತ್ತು ಇಂಗ್ಲಿಷುಗಳೇ ರಾರಾಜಿಸುತ್ತಿವೆ.
ಇವತ್ತು ಕೇಂದ್ರ ಸರ್ಕಾರದ ಇಲಾಖೆಗಳ ಉದ್ಯೋಗಗಳೆಲ್ಲ ಯಾರ ಪಾಲಾಗುತ್ತಿದೆ? ಕೇಂದ್ರ ಸರ್ಕಾರದ ಉದ್ಯೋಗ ಬೇಕೆಂದರೆ ಹಿಂದಿ ಅಥವಾ ಇಂಗ್ಲಿಷ್ ಗೊತ್ತಿರಬೇಕು. ಈ ಭಾಷೆಗಳಲ್ಲಿ ವಿದ್ಯಾಭ್ಯಾಸ ಮಾಡಿರಬೇಕು. ಈ ಎರಡೂ ಭಾಷೆಗಳಿಂದ ದೂರವಿರುವ ಈ ದೇಶದ ನಾಗರಿಕರೇನು ಮಾಡಬೇಕು? ಈ ಕೆಟ್ಟ ನೀತಿಯಿಂದಲೇ ಬ್ಯಾಂಕುಗಳೂ ಸೇರಿದಂತೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಇಲಾಖೆಗಳು, ಸಂಸ್ಥೆಗಳು, ಸಾರ್ವಜನಿಕ ಕ್ಷೇತ್ರದ ಉದ್ಯಮಗಳಲ್ಲಿ ಕನ್ನಡಿಗರಿಗೆ ಕೆಲಸ ದೊರೆಯುತ್ತಿಲ್ಲ. ಇದೇ ರೀತಿ ಬೇರೆ ಬೇರೆ ರಾಜ್ಯಗಳ ಸ್ಥಳೀಯ ಭಾಷಿಕರಿಗೆ ಉದ್ಯೋಗ ಸಿಗುತ್ತಿಲ್ಲ. ನಮ್ಮೂರಿನ ಬ್ಯಾಂಕುಗಳಲ್ಲಿ ಯಾವುದೋ ರಾಜ್ಯದಿಂದ ಬಂದ ಹಿಂದೀವಾಲಾಗಳು ಹೇಗೆ ನುಸುಳಿಕೊಂಡರು ಎಂಬುದಕ್ಕೆ ಕಾರಣ ಹುಡುಕುತ್ತ ಹೋದರೆ ಅದು ಕೇಂದ್ರ ಸರ್ಕಾರದ ಪಕ್ಷಪಾತದ ಭಾಷಾನೀತಿಯತ್ತಲೇ ನಮ್ಮನ್ನು ಕರೆದುಕೊಂಡುಹೋಗುತ್ತದೆ.
ಮುಖ್ಯಮಂತ್ರಿಗಳೇನೋ ತ್ರಿಭಾಷಾ ಸೂತ್ರವನ್ನು ಕಡ್ಡಾಯವಾಗಿ ಪಾಲಿಸಿ ಎಂದು ಬ್ಯಾಂಕರುಗಳಿಗೆ ಹೇಳಿದರು. ಅಷ್ಟಕ್ಕೂ ತ್ರಿಭಾಷಾ ಸೂತ್ರದಲ್ಲಿರುವ ಹಿಂದಿ ನಮಗೇಕೆ ಬೇಕು? ಇಂಗ್ಲಿಷ್ ಮತ್ತು ಕನ್ನಡ ಇದ್ದರೆ ಸಾಲದೆ? ನಾನು ಈ ತ್ರಿಭಾಷಾ ಸೂತ್ರವನ್ನೇ ಒಪ್ಪುವುದಿಲ್ಲ. ತ್ರಿಭಾಷಾ ಸೂತ್ರದ ಬಗ್ಗೆ ರಾಷ್ಟ್ರಕವಿ ಕುವೆಂಪು ಅವರು ತಮ್ಮ ಕವನವೊಂದರಲ್ಲೇ ಕಟುವಾಗಿ ಟೀಕಿಸಿದ್ದರು.
ಭಾಷಾ ತ್ರಿಶೂಲವೀ ತ್ರಿಭಾಷಾ ಸೂತ್ರ
ಬಾಲಕರ ರಕ್ಷಿಸೈ ಹೇ ತ್ರಿಣೇತ್ರ!
ಚೂರು ತಿಂಡಿಗೆ ಸಿಕ್ಕಿಸಿಹರೋ ಈ ಮೂರು ಗಾಳ
ನುಂಗದಿದ್ದರೆ ಹಸಿವೆ, ನುಂಗಿದರೆ ಪ್ರಾಣಶೂಲ!
ತ್ರಿಭಾಷಾ ಸೂತ್ರ ಹೊರನೋಟಕ್ಕೆ ಸೊಗಸಾಗಿ ಕಾಣಬಹುದು. ಆದರೆ ಅದರ ಆಂತರ್ಯದಲ್ಲಿ ಇತರ ಜನಭಾಷೆಗಳನ್ನು ತುಳಿಯುವ ಹುನ್ನಾರವಿದೆ ಎಂಬ ಕುವೆಂಪು ಅವರ ಮುಂಗಾಣ್ಕೆಯನ್ನು ನಾವು ಗಮನಿಸಿಬೇಕು. ತ್ರಿಭಾಷಾ ಸೂತ್ರದ ಒಳಹುನ್ನಾರಗಳನ್ನು ಸ್ಪಷ್ಟವಾಗಿ ಬಲ್ಲವರಾಗಿದ್ದ ಕುವೆಂಪು ಅವರು ತಮ್ಮ ವಿಚಾರಕ್ರಾಂತಿಯಲ್ಲಿ ಹೀಗೆ ಹೇಳಿದ್ದರು. “ ರಾಜಕೀಯ ದುರಭಿಸಂಧಿಯಿಂದ ಪ್ರೇರಿತವಾದುದು ಈ ತ್ರಿಭಾಷಾ ಸೂತ್ರ. ಅದರ ಪ್ರಕಾರ, ಹಿಂದಿ ಇಂಗ್ಲಿಷುಗಳು ಬಲಾತ್ಕಾರ ಭಾಷೆಗಳಾಗುತ್ತವೆ. ಕನ್ನಡಕ್ಕೆ ಪೆಟ್ಟು ಬೀಳುತ್ತದೆ. ಇದು ಆ ಸೂತ್ರದಲ್ಲಿ ಕಾದಿರುವ ತೀವ್ರವಾದ ಅಪಾಯ. ಎಲ್ಲರೂ ಇಂಗ್ಲಿಷ್ ಮತ್ತು ಹಿಂದಿ ಕಲಿಯಬೇಕೆನ್ನುವುದೂ ದಬ್ಬಾಳಿಕೆಯ ಸೂಚಕವಲ್ಲದೆ ಮತ್ತೇನು? ಪ್ರಜಾಪ್ರಭುತ್ವದಲ್ಲಿ ಬಲಾತ್ಕಾರಕ್ಕೆ ಸ್ಥಾನವಿರಕೂಡದು. ಎಲ್ಲರಿಗೂ ಎಲ್ಲ ಭಾಷೆಯೂ ಏತಕ್ಕೆ ಬೇಕು? ಪ್ರತಿಯೊಬ್ಬರೂ ತಮಗೆ ಅಗತ್ಯವಿರುವ ಭಾಷೆಯನ್ನು ಕಲಿಯಬಹುದು. ಅಲ್ಲದೆ ತ್ರಿಭಾಷಾ ಸೂತ್ರವೇ ಏಕೆ? ಭರತಖಂಡಕ್ಕೀಗ ಬೇಕಾಗಿರುವುದು ಬಹುಭಾಷಾ ಸೂತ್ರ. ನಮ್ಮ ಜನ ಕಲಿಯಬೇಕಾದುದು ಇಂಗ್ಲಿಷನ್ನು ಮಾತ್ರವಲ್ಲ, ವೈಜ್ಞಾನಿಕ ಆವಶ್ಯಕತೆಗಳಿಗಾಗಿ ರಷ್ಯನ್, ಜರ್ಮನ್ ಮುಂತಾದ ಭಾಷೆಗಳನ್ನು ಕೂಡ ಕಲಿಯಬೇಕು.”
ತ್ರಿಭಾಷಾ ಸೂತ್ರದ ಪಿತೂರಿಯನ್ನು ಚೆನ್ನಾಗಿಯೇ ಗ್ರಹಿಸಿದ್ದ ತಮಿಳಿಗರು ಅದನ್ನು ತಮ್ಮ ನಾಡಿನೊಳಗೆ ಬಿಟ್ಟುಕೊಳ್ಳಲಿಲ್ಲ. ತಮಿಳುನಾಡಿನ ಜನರು ಮತ್ತು ಅಲ್ಲಿಯ ಸರ್ಕಾರ. ತಮಿಳಿಗರ ನಿರಂತರ ಹೋರಾಟ, ಬಲಿದಾನದಿಂದಾಗಿಯೇ ೧೯೭೬ರಲ್ಲಿ ಕೇಂದ್ರ ಸರ್ಕಾರ ಆಡಳಿತ ಭಾಷೆ ಕಾಯ್ದೆಗೆ ತಿದ್ದುಪಡಿ ತಂದು ತಮಿಳುನಾಡನ್ನು ಆ ಕಾಯ್ದೆಯಿಂದ ಹೊರಗೆ ಇಟ್ಟಿತು. ಅದರರ್ಥವೇನು? ಹಿಂದಿಯೇತರ ರಾಜ್ಯಗಳ ಜನರಿಗೆ ದೇಶದ ಆಡಳಿತ ಭಾಷೆ ಕಾಯ್ದೆಯಿಂದ ಸಮಸ್ಯೆಯಾಗುತ್ತಿದೆ ಎಂದಲ್ಲವೇ? ತಮಿಳುನಾಡಿಗೆ ಯಾವ ಮಾನದಂಡವನ್ನು ಇಟ್ಟುಕೊಂಡು ಈ ವಿಶೇಷ ಅವಕಾಶವನ್ನು ಒದಗಿಸಲಾಯಿತೋ ಅದೇ ಮಾನದಂಡ ಕರ್ನಾಟಕ, ಕೇರಳ, ಆಂಧ್ರ, ಒಡಿಸ್ಸಾ, ಅಸ್ಸಾಂ, ಮಣಿಪುರ, ಮಹಾರಾಷ್ಟ್ರದಂಥ ರಾಜ್ಯಗಳಿಗೂ ಅನ್ವಯಿಸುವುದಿಲ್ಲವೇ? ಇವತ್ತು ಕರ್ನಾಟಕಕ್ಕೆ ಆಗಬೇಕಾಗಿರುವುದೂ ಅದೇ. ಹೇಗೆ ೧೯೭೬ರ ಸಂವಿಧಾನ ತಿದ್ದುಪಡಿಯಲ್ಲಿ ಆಡಳಿತ ಭಾಷೆ ಕಾಯ್ದೆಯಿಂದ ತಮಿಳುನಾಡನ್ನು ಹೊರಗೆ ಇಡಲಾಯಿತೋ ಹಾಗೆಯೇ ಕರ್ನಾಟಕವನ್ನೂ ಹೊರಗೆ ಇಡಬೇಕಿದೆ. ತನ್ಮೂಲಕ ಕರ್ನಾಟಕದಲ್ಲಿ ತ್ರಿಭಾಷಾ ಸೂತ್ರದ ಬದಲು ದ್ವಿಭಾಷಾ ಸೂತ್ರ ಜಾರಿಗೆ ಬರಬೇಕಾಗಿದೆ. ಆದರೆ ದ್ವಿಭಾಷಾ ಸೂತ್ರ ಜಾರಿಗೆ ಬರುವುದಿರಲಿ, ತ್ರಿಭಾಷಾ ಸೂತ್ರವನ್ನೂ ಪಾಲಿಸದೆ, ಕನ್ನಡವೂ ಸೇರಿದಂತೆ ಸ್ಥಳೀಯ ಭಾಷೆಗಳನ್ನು ಕೊಲ್ಲುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ.
ಇವತ್ತು ಕೇವಲ ಬ್ಯಾಂಕು, ರೈಲ್ವೆಯಂಥ ಕೇಂದ್ರ ಸರ್ಕಾರದ ಉದ್ಯಮಗಳು, ಇಲಾಖೆಗಳು ಮಾತ್ರವಲ್ಲ ಖಾಸಗಿ ಬಂಡವಾಳಶಾಹಿಗಳು ತಮ್ಮ ಮಾಲ್‌ಗಳು, ಔಟ್‌ಲೆಟ್‌ಗಳಲ್ಲೂ ಹಿಂದಿಭಾಷೆಯನ್ನು ತುರುಕುತ್ತಿದ್ದಾರೆ. ತೊಗರಿಬೇಳೆ, ಉದ್ದಿನಬೇಳೆ ಎಂಬ ಹೆಸರುಗಳು ಹೋಗಿ ಈಗ ತೋರ್ ದಾಲ್, ಮೂಂಗ್ ದಾಲ್‌ಗಳು ಬಂದಿವೆ. ಹಿಟ್ಟು ಹೋಗಿ ಆಟ್ಟಾ ಆಗಿದೆ. ಇಂಥ ಸಂದರ್ಭದಲ್ಲಿ ಇಡೀ ಸೆಪ್ಟೆಂಬರ್ ತಿಂಗಳಲ್ಲಿ ಹಿಂದಿ ಮಾಸ, ಹಿಂದಿ ಪಾಕ್ಷಿಕ, ಹಿಂದಿ ದಿವಸ ಇತ್ಯಾದಿ ಬಣ್ಣಬಣ್ಣದ ಹೆಸರುಗಳನ್ನು ಇಟ್ಟುಕೊಂಡು ಕೇಂದ್ರ ಸರ್ಕಾರ ಕೋಟ್ಯಂತರ ರುಪಾಯಿ ಖರ್ಚು ಮಾಡಿ ಎಲ್ಲ ಇಲಾಖೆಗಳನ್ನೂ, ಬ್ಯಾಂಕುಗಳನ್ನೂ, ತನ್ನ ಸುಪರ್ದಿಯಲ್ಲಿರುವ ಸಂಸ್ಥೆ, ಉದ್ದಿಮೆಗಳನ್ನು ಹಿಂದೀಕರಣಗೊಳಿಸುತ್ತಿದೆ.
ಇದೇ ಪರಿಸ್ಥಿತಿ ಮುಂದುವರೆದರೆ ಜನರ ಸಿಟ್ಟು ರಟ್ಟೆಗೆ ಬಂದು, ಇದೇ ಬ್ಯಾಂಕು ವಗೈರೆಗಳಿಗೆ ಜನರೇ ನುಗ್ಗುವಂಥ ದಿನಗಳು ಹತ್ತಿರವಾಗುತ್ತವೆ. ಸೋವಿಯತ್ ಯೂನಿಯನ್ ಒಡೆದು ಚೂರಾಗಿದ್ದು ಹೇಗೆ ಎಂಬುದು ನಮ್ಮನ್ನು ಆಳುವವರಿಗೆ ಗೊತ್ತಿಲ್ಲವೇ? ಅಂಥ ದುರ್ದಿನಗಳು ಭಾರತ ಒಕ್ಕೂಟಕ್ಕೂ ಬರಬೇಕೆ?
-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

No comments:
Post a Comment