‘ರಾಜ್ಯದ ಎಲ್ಲ ವಾಣಿಜ್ಯ ಸಂಸ್ಥೆಗಳು ನಾಮಫಲಕಗಳಲ್ಲಿ ಕನ್ನಡ ಬಳಸಬೇಕು. ಎಲ್ಲೆಲ್ಲಿ ಕನ್ನಡದ ಜತೆಗೆ ಬೇರೆ ಭಾಷೆ ಗಳನ್ನು ಬಳಸಲಾಗುತ್ತದೆಯೋ, ಅಲ್ಲಿ ಕನ್ನಡವನ್ನು ದೊಡ್ಡ ಅಕ್ಷರಗಳಲ್ಲಿ ಹಾಗೂ ಪ್ರಧಾನವಾಗಿ ಬಳಸಬೇಕು. ಅನಂತರ ಬೇರೆ ಭಾಷೆಗಳನ್ನು ಕನ್ನಡಕ್ಕಿಂತ ಸಣ್ಣ ಪ್ರಮಾಣದಲ್ಲಿ ಬಳಸಬೇಕು’ ಎಂಬುದು ಕರ್ನಾಟಕ ಸರ್ಕಾರದ ಸ್ಪಷ್ಟ ನೀತಿ. ಈ ಸಂಬಂಧ ರಾಜ್ಯ ಸರ್ಕಾರ ಸಾಕಷ್ಟು ಸುತ್ತೋಲೆಗಳನ್ನು ಮೇಲಿಂದ ಮೇಲೆ ಹೊರಡಿಸಿದೆ. ಈ ನಿಯಮವನ್ನು ಪಾಲಿಸದವರಿಗೆ ದಂಡ ವಿಧಿಸುವ ಅಧಿಕಾರವೂ ಕಾರ್ಮಿಕ ಇಲಾಖೆಗಿದೆ.
ಇದು ಕೇವಲ ಕರ್ನಾಟಕ ರಾಜ್ಯವೊಂದಕ್ಕೆ ಅನ್ವಯವಾಗುವ ವಿಷಯವಲ್ಲ. ಎಲ್ಲ ರಾಜ್ಯಗಳೂ ತಮ್ಮ ತಮ್ಮ ನಾಡಿನಲ್ಲಿ ತಮ್ಮ ಆಡಳಿತ ಭಾಷೆಯನ್ನೇ ನಾಮಪಲಕಗಳಿಗೆ ಬಳಸುವಂತೆ ನಿಯಮಾವಳಿಗಳನ್ನು ರೂಪಿಸಿವೆ. ಅದನ್ನು ಎಲ್ಲ ಕಡೆಯೂ ಪಾಲಿಸಲಾಗುತ್ತಿದೆ.
ನಾವು ಕರ್ನಾಟಕ ರಕ್ಷಣಾ ವೇದಿಕೆಯನ್ನು ಆರಂಭಿಸುವ ಹೊತ್ತಿನಲ್ಲಿ ಅನ್ಯಭಾಷಾ ನಾಮಫಲಕಗಳ ಹಾವಳಿ ಮಿತಿಮೀರಿ ಹೋಗಿತ್ತು. ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಇಂಗ್ಲಿಷ್ ನಾಮಫಲಕಗಳೇ ಎಲ್ಲೆಡೆಯೂ ಕಣ್ಣಿಗೆ ರಾಚುತ್ತಿದ್ದವು. ಯಾವುದೇ ಚಳವಳಿಗಳ ಸಂದರ್ಭದಲ್ಲಿ ಚಳವಳಿಯ ಕಾರ್ಯಕರ್ತರು ಈ ಅನ್ಯಭಾಷಾ ನಾಮಫಲಕಗಳನ್ನು ಕಂಡರೆ ರೊಚ್ಚಿಗೇಳುತ್ತಿದ್ದರು. ಹೀಗಾಗಿ ಗೋಕಾಕ್ ಚಳವಳಿಯಿಂದ ಹಿಡಿದು, ನಾಡಿನಲ್ಲಿ ನಡೆದ ಅನೇಕ ಭಾಷಾ ಚಳವಳಿಗಳ ಸಂದರ್ಭದಲ್ಲಿ ಅನ್ಯಭಾಷಾ ನಾಮಫಲಕಗಳಿಗೆ ಕಲ್ಲು ಹೊಡೆಯುವ, ಕಿತ್ತು ಎಸೆಯುವ, ಮಸಿ ಬಳಿಯುವ ಚಳವಳಿಗಳೂ ಸಾಂಕೇತಿಕವಾಗಿ ನಡೆದುಕೊಂಡು ಬಂದಿವೆ. ಕರ್ನಾಟಕ ರಕ್ಷಣಾ ವೇದಿಕೆ ಸಹ ಕನ್ನಡವಿಲ್ಲದ ನಾಮಫಲಕಗಳ ವಿರುದ್ಧ ಹಲವು ಬಾರಿ ಅಭಿಯಾನ ನಡೆಸಿತು. ಈ ಸಂದರ್ಭದಲ್ಲಿ ಹಲವು ಬಾರಿ ಅಂಗಡಿ ಮುಂಗಟ್ಟು ಮಾಲೀಕರಿಗೆ ತಮ್ಮ ನಾಮಫಲಕಗಳಲ್ಲಿ ಕನ್ನಡವನ್ನು ಬಳಸುವಂತೆ ಮನವೊಲಿಸುವ ಕಾರ್ಯವನ್ನು ಮಾಡಿದ್ದೆವು. ನಂತರ ತಕ್ಕಮಟ್ಟಿಗೆ ಕನ್ನಡ ಚಳವಳಿಗಾರರಿಗೆ ಅಂಜಿಯೇ ಕನ್ನಡ ನಾಮಫಲಕಗಳನ್ನು ಅಳವಡಿಸಿಕೊಳ್ಳುವ ಕಾರ್ಯ ಆರಂಭವಾಯಿತು.
ಆದರೆ ಈಗ ಮತ್ತೆ ನಾವು ಕನ್ನಡ ನಾಮಫಲಕಗಳಿಗಾಗಿ ಬೀದಿಗಿಳಿಯುವ ಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕ ಅದರಲ್ಲೂ ವಿಶೇಷವಾಗಿ ಬೆಂಗಳೂರು ಬೇರೆ ಬೇರೆ ರಾಜ್ಯಗಳಿಂದ ವಲಸೆ ಬರುವ ಜನರ ಸ್ವರ್ಗವಾಗಿ ಪರಿಣಮಿಸಿದೆ. ಬೆಂಗಳೂರು ಸಿಲಿಕಾನ್ ಸಿಟಿ ಎಂದೇ ಹೆಸರಾಗಿಹೋಗಿದೆ. ಎಲ್ಲೂ ನೆಲೆ ನಿಲ್ಲದವರು ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಳ್ಳಬಹುದು ಎಂಬ ಭಾವ ಸಾರ್ವತ್ರಿಕವಾಗಿ ಹರಡಿ ಹೋಗಿದೆ. ಮೊದಲು ತಮಿಳುನಾಡು-ಆಂಧ್ರಪ್ರದೇಶ-ಕೇರಳಗಳಿಂದ ವಲಸೆ ಮೇರೆ ಮೀರಿತ್ತು. ಈಗ ಉತ್ತರ ಭಾರತೀಯರು ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಲಸೆ ಬರುತ್ತಿದ್ದಾರೆ.
ಕರ್ನಾಟಕದಲ್ಲಿ ವ್ಯವಹಾರ, ಉದ್ದಿಮೆ ಮಾಡಲು ಬರುವವರಿಗೆ ಇಲ್ಲಿ ಸಂಸ್ಕೃತಿ, ಭಾಷೆ, ನಡೆನುಡಿಯ ಬಗ್ಗೆ ಇನಿತೂ ಗೌರವವಿಲ್ಲ. ಹೀಗಾಗಿ ಅವರು ತಮ್ಮ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗವನ್ನೂ ಕೊಡುವುದಿಲ್ಲ, ಕನ್ನಡವನ್ನೂ ಬಳಸುವುದಿಲ್ಲ. ತೋರಿಕೆಗಾದರೂ ತಮ್ಮ ಸಂಸ್ಥೆಯ ನಾಮಫಲಕಗಳನ್ನು ಕನ್ನಡದಲ್ಲಿ ಬರೆಯಿಸುವುದಿಲ್ಲ. ಬಹುರಾಷ್ಟ್ರೀಯ ಕಂಪೆನಿಗಳು, ಕಾರ್ಪರೇಟ್ ಸಂಸ್ಥೆಗಳು ತಮ್ಮ ಜಾಹೀರಾತು ಫಲಕಗಳಲ್ಲೂ ಒಂದೇ ಒಂದು ಅಕ್ಷರ ಕನ್ನಡವನ್ನು ಬರೆಸುವುದಿಲ್ಲ. ಎಲ್ಲವೂ ಇಂಗ್ಲಿಷ್‌ನಲ್ಲಿ, ಈಗೀಗ ಇಂಗ್ಲಿಷ್ ಜತೆಗೆ ಹಿಂದಿಯೂ ರಾರಾಜಿಸುತ್ತಿದೆ.
ಹಾಗಿದ್ದರೆ ಭಾಷಾವಾರು ಪ್ರಾಂತ್ಯ ವಿಂಗಡಣೆಯ ಅರ್ಥವೇನು ಉಳಿಯಿತು? ಕನ್ನಡ ಸರ್ವಮಾಧ್ಯಮ ನುಡಿಯಾಗಿ ಬಳಕೆಯಾಗಬೇಕು ಎಂಬುದು ಮಹಾಕವಿ ಕುವೆಂಪು ಅವರಿಂದ ಹಿಡಿದು ಎಲ್ಲರ ಒಕ್ಕೊರಲ ಆಗ್ರಹವಾಗಿತ್ತು. ಈಗ ಎಲ್ಲಿದೆ ಕನ್ನಡ? ಆಡಳಿತ ಭಾಷೆಯಿಂದ ಹಿಡಿದು ಶಿಕ್ಷಣ ಮಾಧ್ಯಮದವರೆಗೆ ಎಲ್ಲೆಡೆ ಈಗ ಇಂಗ್ಲಿಷ್-ಹಿಂದಿಗಳ ಸಾಮ್ರಾಜ್ಯ. ಕನ್ನಡ ಸಂಸ್ಕೃತಿ ಪರಂಪರೆಯನ್ನು ಉಳಿಸಬೇಕಾದ ರಾಜ್ಯ ಸರ್ಕಾರವೂ ಕೈ ಕಟ್ಟಿ ಕುಳಿತರೆ ನಾಡು ಹೇಗೆ ಉಳಿದೀತು? ನುಡಿ ಹೇಗೆ ಉಳಿದೀತು?
ದುರದೃಷ್ಟವೆಂದರೆ ನಮ್ಮ ನ್ಯಾಯಾಂಗ ವ್ಯವಸ್ಥೆಯ ಅತಿಯಾದ ಕ್ರಿಯಾಶೀಲತೆಯೂ ಕನ್ನಡಿಗರಿಗೆ ಮುಳುವಾಗಿ ಪರಿಣಮಿಸಿದೆ. ಕನ್ನಡ ನಾಮಫಲಕಗಳ ವಿಷಯದಲ್ಲಿ ಸರ್ಕಾರದ ನಿಯಮವನ್ನೇ ರಾಜ್ಯ ಹೈಕೋರ್ಟ್ ವಿಭಾಗೀಯ ಪೀಠ ರದ್ದು ಮಾಡಿತು. ವೊಡಾಫೋನ್ ಸಂಸ್ಥೆ ತನ್ನ ನಾಮಫಲಕಗಳನ್ನು ಇಂಗ್ಲಿಷ್‌ನಲ್ಲಿ ಬರೆಯಿಸಿದ ಪರಿಣಾಮ ರಾಜ್ಯ ಸರ್ಕಾರ ನೀಡಿದ ನೋಟಿಸ್‌ಗೆ ಪ್ರತಿಯಾಗಿ ಅದು ನ್ಯಾಯಾಲಯದ ಮೊರೆ ಹೋಯಿತು. ನ್ಯಾಯಾಲಯವೂ ಸಹ ವೊಡಾಫೋನ್ ಸಂಸ್ಥೆ ಇಂಗ್ಲಿಷ್‌ನಲ್ಲೇ ನಾಮಫಲಕ ಅಳವಡಿಸಿಕೊಳ್ಳಲು ಅನುಮತಿ ನೀಡಿದ್ದಲ್ಲದೆ, ಕನ್ನಡ ಕಡ್ಡಾಯವಾಗಿ ಬಳಸಲು ಆದೇಶಿಸುವ “ಮಳಿಗೆ ಮತ್ತು ವಾಣಿಜ್ಯ ಸಂಸ್ಥೆಗಳ ನಿಯಮ-೧೯೬೩ರ ಸೆಕ್ಷನ್ ೨೪(ಎ)”ಗೆ ೨೦೦೮ರಲ್ಲಿ ಮಾಡಿದ್ದ ತಿದ್ದುಪಡಿ ಆಧಾರದ ಮೇಲೆ ರೂಪಿಸಿದ್ದ ನಿಯಮವನ್ನು ಹೈಕೋರ್ಟ್ ರದ್ದುಪಡಿಸಿತು.
ನ್ಯಾಯಾಲಯಗಳ ಇಬ್ಬಗೆ ನೀತಿ ಹೇಗಿರುತ್ತದೆ ನೋಡಿ. ಹಿಂದೆ, ಇದೇ ರಾಜ್ಯ ಹೈಕೋರ್ಟ್ ಇದೇ ಸೆಕ್ಷನ್ ೨೪ (ಎ) ಬೆಂಬಲಿಸಿ ತೀರ್ಪು ನೀಡಿತ್ತು. ಬೆಳಗಾವಿಯ ಲಕ್ಷ್ಮಣ್ ಒಮಾನ್ನ ಭಾಮನೆ ಎಂಬಾತ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ೨೪-ಎ ಕಾಯ್ದೆಯ ಉಲ್ಲಂಘನೆ ಕೂಡದು ಎಂದು ಆದೇಶಿಸಿತ್ತು.
ನ್ಯಾಯಾಲಯಗಳು ಹೀಗೆ ಎರಡೆರಡು ರೀತಿಯ ತೀರ್ಪನ್ನು ಕೊಟ್ಟರೆ ಯಾವುದನ್ನು ಒಪ್ಪಬೇಕು, ಯಾವುದನ್ನು ಬಿಡಬೇಕು? ಎಲ್ಲ ನ್ಯಾಯಪೀಠಗಳು ಭಾರತ ಸಂವಿಧಾನದ ಆಶಯಕ್ಕೆ ತಕ್ಕಂತೆಯೇ ವಿಚಾರಣೆ ನಡೆಸಬೇಕು, ತೀರ್ಪು ನೀಡಬೇಕಲ್ಲವೇ? ಜನಪ್ರತಿನಿಧಿಗಳು ರೂಪಿಸಿದ ಶಾಸನಗಳು ಜನವಿರೋಧಿಯಾಗಿಲ್ಲದ ಹೊರತು ಅವುಗಳನ್ನು ರದ್ದುಪಡಿಸುವ ಕ್ರಮ ಪ್ರಜಾಪ್ರಭುತ್ವದ ಬೇರುಗಳನ್ನೇ ಅಲುಗಾಡಿಸುವುದಿಲ್ಲವೇ?
ಶಾಸಕಾಂಗ, ಕಾರ್ಯಾಂಗಗಳ ಜವಾಬ್ದಾರಿ, ಹೊಣೆಗಾರಿಕೆ, ಹಕ್ಕುಗಳನ್ನೆಲ್ಲ ನ್ಯಾಯಾಂಗವೇ ಚಲಾಯಿಸಲು ಆರಂಭಿಸಿದರೆ ಪ್ರಜಾಪ್ರಭುತ್ವ ದುರ್ಬಲವಾಗಿಹೋಗುತ್ತದೆ. ನ್ಯಾಯಾಲಯಗಳನ್ನು, ನ್ಯಾಯಾಲಯಗಳ ತೀರ್ಮಾನಗಳನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಪ್ಪಿಕೊಳ್ಳಬೇಕು ಎಂಬುದೇನೋ ಸರಿ. ಆದರೆ ನಮ್ಮ ಸಂವಿಧಾನವೇ ನೀಡಿರುವ ಈ ವಿಶಾಲವಾದ ಅಧಿಕಾರವನ್ನು ನ್ಯಾಯಾಲಯಗಳು ಸರಿಯಾಗಿ ನಿರ್ವಹಿಸುತ್ತಿವೆಯೇ ಎಂಬುದು ಮೂಲಭೂತ ಪ್ರಶ್ನೆ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ, ಇಲ್ಲಿ ಪ್ರಜೆಗಳೇ ಪ್ರಭುಗಳು ಎಂಬುದನ್ನು ನ್ಯಾಯಾಲಯಗಳು ಮನಗಾಣಬೇಕು. ಒಂದಷ್ಟು ಸ್ವಯಂ ನಿಯಂತ್ರಣ ಮತ್ತು ನಿರ್ಬಂಧಗಳಿಗೂ ಅವು ಒಳಪಡಲೇಬೇಕು. ಅದರಲ್ಲೂ ವಿಶೇಷವಾಗಿ ಜನಸಮೂಹವನ್ನು ಇಡಿಯಾಗಿ ಪ್ರಭಾವಿಸುವ ಭಾಷೆ-ಸಂಸ್ಕೃತಿಗಳಿಗೆ ಸಂಬಂಧಿಸಿದ ತೀರ್ಮಾನಗಳನ್ನು ನೀಡುವಾಗ ವಿವೇಚನೆಯಿಂದ ವರ್ತಿಸಬೇಕು.
ಶಿಕ್ಷಣ ಮಾಧ್ಯಮವಾಗಿ ಕನ್ನಡವನ್ನು ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ತೀರ್ಮಾನದ ವಿರುದ್ಧ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಸಹ ಇಂಥದ್ದೇ ಆಗಿತ್ತು. ಬಹಳ ಹಿಂದೆಯೇ ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕು ಎಂದು ಹೇಳಿದ್ದ ಸುಪ್ರೀಂ ಕೋರ್ಟ್, ಇತ್ತೀಚಿನ ತೀರ್ಪಿನಲ್ಲಿ ಮಾತೃಭಾಷೆ ಯಾವುದೆಂಬುದನ್ನು ಪಾಲಕರೇ ತೀರ್ಮಾನ ಮಾಡಬೇಕು ಎಂದು ದ್ವಂದ್ವ ನೀತಿ ಪ್ರದರ್ಶಿಸಿತು.
ಭಾರತವೆಂಬುದು ಒಂದು ಒಕ್ಕೂಟ. ಭಾಷಾವಾರು ಪ್ರಾಂತ್ಯಗಳ ಒಕ್ಕೂಟದಲ್ಲಿ ಪ್ರತಿ ರಾಜ್ಯವೂ ತನ್ನ ಭಾಷೆ, ಸಂಸ್ಕೃತಿಯನ್ನು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದೆ. ಈ ಹಕ್ಕನ್ನು ಕಿತ್ತುಕೊಂಡರೆ ಒಕ್ಕೂಟಕ್ಕೇ ಅರ್ಥ ಉಳಿಯುವುದಿಲ್ಲ. ಒಂದು ಪಕ್ಷ ಒಕ್ಕೂಟ ವ್ಯವಸ್ಥೆ ಶಿಥಿಲಗೊಳ್ಳುತ್ತ ಹೋದರೆ ಈ ದೇಶದ ಅಖಂಡತೆಗೇ ದೊಡ್ಡ ಸವಾಲು ಬಂದುಬಿಡುವ ಸಾಧ್ಯತೆಗಳು ಇರುತ್ತವೆ. ನ್ಯಾಯಾಲಯಗಳು ತೀರ್ಮಾನಗಳನ್ನು ನೀಡುವ ಮೊದಲು ಈ ವಿಷಯವನ್ನು ಸೂಕ್ಷ್ಮವಾಗಿ ಗ್ರಹಿಸಬೇಕು. ಇಲ್ಲದೇ ಹೋದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಈ ದೇಶದ ಬಹುತ್ವ ನಾಶಗೊಂಡು, ಜನಸಮುದಾಯಗಳು ತಿರುಗಿ ಬೀಳುವ, ಆಂತರಿಕ ಕ್ಷೆಭೆ ಉಲ್ಬಣಿಸುವ ಸಾಧ್ಯತೆಗಳೇ ಹೆಚ್ಚು.
ನ್ಯಾಯಾಲಯಗಳ ತೀರ್ಪು ಏನೇ ಇರಲಿ. ಕನ್ನಡ ನಾಮಫಲಕಗಳಿಗಾಗಿ ನಮ್ಮ ಹೋರಾಟ ಮುಂದುವರೆಯುತ್ತದೆ. ಇನ್ನೇನು ನವೆಂಬರ್ ಮಾಸ ಬರುತ್ತಿದೆ. ನವೆಂಬರ್ ಅಂದರೆ ನಾಡಹಬ್ಬದ ಮಾಸ. ನಾವು ರಾಜ್ಯೋತ್ಸವಗಳಿಗೆ ಸೀಮಿತರಾದವರಲ್ಲ, ಪ್ರತಿ ವರ್ಷ ನಾಡಹಬ್ಬವನ್ನು ಕನ್ನಡ ಅನುಷ್ಠಾನದ ಹಬ್ಬವನ್ನಾಗಿ ಆಚರಿಸಿ ನಮಗೆ ರೂಢಿ.
ಬೆಂಗಳೂರು, ಮೈಸೂರು, ಹುಬ್ಬಳ್ಳಿ, ದಾವಣಗೆರೆ, ಬೆಳಗಾವಿಯಂಥ ನಗರಗಳಲ್ಲಿ ಅನ್ಯಭಾಷಾ ನಾಮಫಲಕಗಳ ಹಾವಳಿ ಮಿತಿಮೀರಿ ಹೋಗಿದೆ. ಅದರಲ್ಲೂ ವಿಶೇಷವಾಗಿ ಮಾಲ್‌ಗಳು, ದೊಡ್ಡ ದೊಡ್ಡ ವಾಣಿಜ್ಯ ಸಂಸ್ಥೆಗಳು ಕನ್ನಡವನ್ನು ಕಡೆಗಣಿಸುತ್ತಲೇ ಬಂದಿವೆ. ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಅಂಗಡಿ, ಮುಂಗಟ್ಟು, ಸಂಸ್ಥೆ, ಮಾಲ್‌ಗಳೂ ಕನ್ನಡವನ್ನೇ ಪ್ರಧಾನವಾಗಿ ಬಳಸಬೇಕು ಎಂಬುದು ನಮ್ಮ ಆಗ್ರಹ. ಅದನ್ನು ಮುಂಚಿತವಾಗಿಯೇ ತಿಳಿಸುವ ಕೆಲಸವನ್ನು ಮಾಡುತ್ತೇವೆ. ಒಂದು ವೇಳೆ ಈ ಸಂಸ್ಥೆಗಳು ಕನ್ನಡ ವಿರೋಧವನ್ನು ಮುಂದುವರೆಸಿದರೆ, ತೀವ್ರ ಸ್ವರೂಪದ ಪ್ರತಿಭಟನೆಗೂ ನಾವು ಸಿದ್ಧರಿರುತ್ತೇವೆ.
ನ್ಯಾಯಾಲಯಗಳು ಏನೇ ಹೇಳಿಕೊಳ್ಳಲಿ, ಸರ್ಕಾರ ಏನೇ ನಿಯಮಾವಳಿ ರೂಪಿಸಿಕೊಳ್ಳಲಿ. ಇದು ಕರ್ನಾಟಕ, ಕನ್ನಡಿಗರ ನಾಡು. ಇಲ್ಲಿ ಕನ್ನಡಿಗರೇ ಸಾರ್ವಭೌಮರು, ಕನ್ನಡವೇ ಸರ್ವಮಾಧ್ಯಮ ಭಾಷೆ. ಇದನ್ನು ಉಳಿಸಿಕೊಳ್ಳುವುದು ನಮ್ಮ ಹಕ್ಕು. ನಮ್ಮ ಚಳವಳಿ ಜಾರಿಯಲ್ಲಿರುತ್ತದೆ.
-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ

No comments:
Post a Comment