ಬೆಂಗಳೂರಿನ ಪೊಲೀಸ್ ಕಮಿಷನರ್ ಎನ್.ಎಸ್.ಮೇಘರಿಕ್ ಇಲ್ಲದ ಸಮಸ್ಯೆಯೊಂದನ್ನು ಸೃಷ್ಟಿಸಿ, ನಂತರ ನಮ್ಮೆಲ್ಲರ ತೀವ್ರ ವಿರೋಧದ ನಂತರ ತಾವೇ ಬಗೆಹರಿಸಿದ್ದಾರೆ. ಯಾರು ಅಂಥ ಕೆಟ್ಟ ಸಲಹೆ ನೀಡಿದರೋ ಏನೋ, ಅವರು ಸುತ್ತೋಲೆಯೊಂದನ್ನು ಹೊರಡಿಸಿ ಕನ್ನಡ ರಾಜ್ಯೋತ್ಸವವನ್ನು ನವೆಂಬರ್ ಒಂದರಿಂದ ಏಳರವರೆಗೆ ಮಾತ್ರ ಆಚರಿಸಬಹುದು, ಅದಾದ ನಂತರ ಆಚರಿಸಬೇಕೆಂದಿದ್ದರೆ ಯಾವುದಾದರೂ ಮೈದಾನಗಳಲ್ಲಿ ಮಾತ್ರ ಆಚರಿಸಬೇಕು, ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದರೆ ಸಂಘಟಕರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂಬ ಆದೇಶವೊಂದನ್ನು ಹೊರಡಿಸಿದ್ದರು. ‘ಕೆಲವು ಸಾರ್ವಜನಿಕ ಸಂಘ ಸಂಸ್ಥೆ’ಗಳ ಮನವಿಯ ಮೇರೆಗೆ ಅವರು ಈ ನಿರ್ಧಾರವನ್ನು ಕೈಗೊಂಡಿದ್ದಾಗಿ ಹೇಳಿಕೊಂಡಿದ್ದರು. ಪುಣ್ಯವಶಾತ್ ಮೇಘರಿಕ್ ಅವರಿಗೆ ತಮ್ಮಿಂದ ಆದ ಪ್ರಮಾದ ಗೊತ್ತಾಗಿ ರಾಜ್ಯೋತ್ಸವವನ್ನು ಸೀಮಿತಗೊಳಿಸುವ ಯಾವ ಉದ್ದೇಶವೂ ಪೊಲೀಸ್ ಇಲಾಖೆಗಿಲ್ಲ, ನಮ್ಮ ಸಹಕಾರವಿರುತ್ತದೆ. ರಾಜ್ಯೋತ್ಸವು ನಿತ್ಯೋತ್ಸವವಾಗಬೇಕು ಎಂಬುದಕ್ಕೆ ಇಲಾಖೆಯ ಸಂಪೂರ್ಣ ಬೆಂಬಲವಿರುತ್ತದೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಕನ್ನಡ ನಾಡು, ನುಡಿ, ಸಂಸ್ಕೃತಿಗಳ ಗಂಧಗಾಳಿಯಿಲ್ಲದಿದ್ದವರು ಬೆಂಗಳೂರು ಪೊಲೀಸ್ ಕಮಿಷನರ್ ಹುದ್ದೆಗೆ ಏರಿದರೆ ಏನಾಗಬಹುದು ಎಂಬುದಕ್ಕೆ ಇದು ಉದಾಹರಣೆ ಅಷ್ಟೆ. ಮೇಘರಿಕ್ ಅವರು ರಾಜಸ್ತಾನದ ಐಪಿಎಸ್ ಕೇಡರ್. ಸಹಜವಾಗಿಯೇ ಅವರಿಗೆ ಕವಿರಾಜಮಾರ್ಗವೂ ಗೊತ್ತಿರಲು ಸಾಧ್ಯವಿಲ್ಲ, ಕುವೆಂಪು ಅವರೂ ಗೊತ್ತಿರಲು ಸಾಧ್ಯವಿಲ್ಲ. ಕರ್ನಾಟಕ ಏಕೀಕರಣಕ್ಕಾಗಿ ಜೀವತೆತ್ತ ರಂಜಾನ್ ಸಾಬ್ ಅಂಥವರ ಹೆಸರನ್ನು ಅವರೆಂದಿಗೂ ಕೇಳಿರರಲಾರರು. ಹೀಗಾಗಿ ರಾಜ್ಯೋತ್ಸವದ ಆಚರಣೆಯ ಹಿನ್ನೆಲೆಯೂ ಅವರಿಗೆ ಅರ್ಥವಾಗುವುದು ಕಷ್ಟ. ಮೇಘರಿಕ್ ಅವರು ಶುದ್ಧಹಸ್ತರು, ಪ್ರಾಮಾಣಿಕರು, ಹಿಂದೆ ಕೆಲಸ ಮಾಡಿದ ಕಡೆಯಲ್ಲೆಲ್ಲ ಘನತೆಯಿಂದ ಕಾರ್ಯನಿರ್ವಹಿಸಿದವರು ಎಂಬುದನ್ನು ಕೇಳಿದ್ದೇನೆ, ಆದರೆ ಇದಷ್ಟೇ ಒಬ್ಬ ಪೊಲೀಸ್ ಕಮಿಷನರ್‌ಗೆ ಇರಬೇಕಾದ ಅರ್ಹತೆಗಳಲ್ಲ. ತಾವು ಕೆಲಸ ಮಾಡುತ್ತಿರುವ ನಾಡಿನ ಇತಿಹಾಸ, ಸಂಸ್ಕೃತಿ, ಜನರ ನಾಡಿಮಿಡಿತಗಳೂ ಅವರಿಗೆ ಗೊತ್ತಿರಬೇಕು.

ಯಾವುದೇ ರಾಜ್ಯೋತ್ಸವ ಕಾರ್ಯಕ್ರಮಕ್ಕಾದರೂ ಪೊಲೀಸರು ಹಲವು ನಿಯಮಗಳನ್ನು ಹೇರುವ ಮೂಲಕವೇ ಅನುಮತಿ ನೀಡಿರುತ್ತಾರೆ. ರಾಜ್ಯೋತ್ಸವ ಎಂದಲ್ಲ, ಮೈಕ್ ಬಳಸಿ ರಸ್ತೆಯಲ್ಲಿ ನಡೆಸುವ ಯಾವುದೇ ಕಾರ್ಯಕ್ರಮವಾದರೂ ಪೊಲೀಸರ ನಿಯಮಾವಳಿಗಳಂತೆಯೇ ಆಚರಿಸಲಾಗುತ್ತದೆ. ರಾತ್ರಿ ೧೧ ಗಂಟೆಯ ನಂತರ ಮೈಕ್ ಬಳಸಬಾರದು ಎಂಬ ನಿಯಮವನ್ನೂ ಸೇರಿದಂತೆ ಹಲವು ಬಗೆಯ ನಿಯಮಗಳನ್ನು ಪಾಲಿಸಲಾಗುತ್ತದೆ. ಒಂದು ವೇಳೆ ಸಂಘಟಕರು ನಿಯಮಗಳನ್ನು ಮೀರಿದರೆ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವ ಅಧಿಕಾರವೂ ಪೊಲೀಸರಿಗಿರುತ್ತದೆ. ಪೊಲೀಸ್ ಇಲಾಖೆಗೆ ಕೊನೆಗೂ ಇದು ಅರ್ಥವಾಗಿದೆ.
ರಾಜ್ಯೋತ್ಸವದ ಆಚರಣೆ ಕುರಿತಂತೆ ಪೊಲೀಸ್ ಕಮಿಷನರ್ ಹೊರಡಿಸಿದ ಸುತ್ತೋಲೆ ಈಗ ಅವರ ಸ್ಪಷ್ಟನೆಯೊಂದಿಗೆ ಅಧಿಕೃತವಾಗಿ ಹಿಂದಕ್ಕೆ ಪಡೆದಂತಾಗಿದ್ದರೂ ಸಹ ಈ ವಿವಾದ ಒಂದಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇಂಥ ಸುತ್ತೋಲೆ ಹೊರಗೆ ಬರಲು ಕಾರಣ ಏನು ಎಂಬುದನ್ನು ಪರಿಶೀಲಿಸಲೇಬೇಕಾಗಿದೆ. ಈ ಕನ್ನಡ ವಿರೋಧಿ ಸುತ್ತೋಲೆಯ ಕುರಿತಂತೆ ವಿವರಣೆ ನೀಡಿದ್ದ ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದೆಂದು ಕೆಲವು ಸಾರ್ವಜನಿಕ ಹಿತರಕ್ಷಣಾ ಸಂಘಟನೆಗಳು ಮನವಿ ಮಾಡಿವೆ. ಅದಕ್ಕಾಗಿಯೇ ಈ ಸುತ್ತೋಲೆಯನ್ನು ಹೊರಡಿಸಲಾಗಿದೆಯೆಂದೂ, ಈ ಸುತ್ತೋಲೆ ಜನಪರವಾಗಿಯೇ ಇದೆಯೆಂದು ಸ್ಪಷ್ಟನೆ ನೀಡಿದ್ದರು. ಈಗ ಪೊಲೀಸರು, ಕನ್ನಡ ರಾಜ್ಯೋತ್ಸವ ಆಚರಣೆಗೆ ಅನುಮತಿ ನೀಡಬೇಡಿ ಎಂದು ಮನವಿ ಮಾಡಿರುವ ಆ ‘ಸಾರ್ವಜನಿಕ ಹಿತರಕ್ಷಣಾ ಸಂಘಟನೆ’ಗಳು ಯಾವುವು ಎಂಬುದನ್ನು ಮೊದಲು ಬಹಿರಂಗ ಮಾಡಬೇಕಿದೆ.
ಯಾಕೆಂದರೆ, ಈ ಸಂಘಟನೆಗಳು ಸಾರ್ವಜನಿಕ ಹಿತರಕ್ಷಣೆಗಾಗಿ ಇವೆಯೋ ಅಥವಾ ಬೇರೆ ಇನ್ಯಾವುದಾದರೂ ‘ಹಿಡನ್ ಅಜೆಂಡಾ’ಗಳನ್ನು ಇಟ್ಟುಕೊಂಡಿರುವ ಸಂಘಟನೆಗಳೋ ಎಂಬುದು ಸಾರ್ವಜನಿಕವಾಗಿ ಗೊತ್ತಾಗಬೇಕಿದೆ. ಬೆಂಗಳೂರು ಈಗ ವಲಸಿಗರ ಸ್ವರ್ಗ. ‘ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ’ ಎಂದು ರಾಷ್ಟ್ರಪತಿಗಳಿಗೆ ಮನವಿ ಮಾಡಿದ ನಾಡದ್ರೋಹಿ ಸಂಘಟನೆಗಳು ಇಲ್ಲಿ ಸಾರ್ವಜನಿಕ ಹಿತರಕ್ಷಣೆಯ ಮಾರುವೇಷದಲ್ಲಿ ಇವೆ. ಬೆಂಗಳೂರು ಅಭಿವೃದ್ಧಿಗೆ ನಾವೂ ದುಡಿಯುತ್ತೇವೆ ಎಂಬ ಘೋಷಣೆ ಮಾಡುತ್ತ, ಕಾರ್ಪರೇಟ್ ಸಂಸ್ಥೆಗಳ ಮತ್ತು ಅವುಗಳ ಸಂಸ್ಕೃತಿ ರಕ್ಷಣೆಗಾಗಿಯೇ ಪಣ ತೊಟ್ಟ ಆ ಪ್ಯಾಕು ಈ ಪ್ಯಾಕು ಸಂಘಟನೆಗಳೂ ಇವೆ. ಕನ್ನಡಿಗರ ಆಚರಣೆಗಳಿಗೆ ಮೂಗು ಮುರಿದರೂ ರಾತ್ರಿ ನೈಟ್ ಲೈಫ್‌ಗೆ ಮಾತ್ರ ತೊಂದರೆಯಾಗಬಾರದು, ಇಡೀ ರಾತ್ರಿ ಪಬ್ಬು-ಬಾರು-ಡಿಸ್ಕೋಥೆಕ್‌ಗಳು ತೆರೆದಿರಬೇಕು ಎಂದು ವಾದಿಸುವ ಕಾರ್ಪರೇಟ್ ಸಂಸ್ಕೃತಿಯ ವಾರಸುದಾರರೂ ಇಲ್ಲಿದ್ದಾರೆ. ಹೀಗಾಗಿ ಬೆಂಗಳೂರನ್ನು ಕನ್ನಡಿಗರಿಂದ ಕಿತ್ತುಕೊಳ್ಳಲು ಯತ್ನಿಸುತ್ತಿರುವ ಈ ಮಾರುವೇಷದ ಸಂಘಟನೆಗಳಿಗೆ ಪೊಲೀಸರು ಮಾರುಹೋಗಿದ್ದರಾ ಎಂಬುದಾದರೂ ನಮಗೆ ಗೊತ್ತಾಗಬೇಕಿದೆ.
ಬೆಂಗಳೂರಿನಲ್ಲಿ ಕನ್ನಡದ ವಾತಾವರಣಕ್ಕೆ ಅನಿಯಂತ್ರಿತ ವಲಸೆಯಿಂದಾಗಿ ಧಕ್ಕೆಯಾಗುತ್ತಿದೆ. ವಲಸೆಯನ್ನು ಸಂವಿಧಾನಬದ್ಧವಾಗಿ ನಿಯಂತ್ರಿಸುವುದು ಕಷ್ಟ. ನಾವು ಭಾರತ ಒಕ್ಕೂಟದ ಭಾಗವಾಗಿದ್ದೇವೆ ಎಂಬ ಕಾರಣಕ್ಕೆ ಈ ವಲಸೆಯನ್ನೂ ಸಹಿಸಿಕೊಳ್ಳಬೇಕಾಗಿ ಬಂದಿದೆ. ಕಡೇ ಪಕ್ಷ ಹೊರರಾಜ್ಯಗಳಿಂದ ಬಂದವರು ಇಲ್ಲಿನ ಭಾಷೆಯನ್ನು ಕಲಿತು, ಇಲ್ಲಿನ ಸಂಸ್ಕೃತಿಯನ್ನು ಗೌರವಿಸಬೇಕು. ಕರ್ನಾಟಕದಿಂದ ಬೇರೆ ರಾಜ್ಯಗಳಿಗೆ ವಲಸೆ ಹೋದ ಕನ್ನಡಿಗರು ಅಲ್ಲಿನ ಭಾಷೆಗಳನ್ನು ಕಲಿತು, ಅಲ್ಲಿನ ಸಂಸ್ಕೃತಿಯನ್ನು ಒಪ್ಪಿಕೊಂಡು ಅಲ್ಲಿಯವರೇ ಆಗಿಹೋಗಿದ್ದಾರೆ. ಹೀಗಿರುವಾಗ ಕರ್ನಾಟಕಕ್ಕೆ ಬರುವ ವಲಸಿಗರೂ ಕೂಡ ಇಲ್ಲಿನ ನುಡಿ-ಸಂಸ್ಕೃತಿಯನ್ನು ಗೌರವಿಸಲೇಬೇಕಲ್ಲವೇ? ಹೀಗಿರುವಾಗ ನವೆಂಬರ್ ತಿಂಗಳಲ್ಲಿ ನಡೆಯುವ ರಾಜ್ಯೋತ್ಸವ ತಕ್ಕಮಟ್ಟಿಗೆ ಬೆಂಗಳೂರಿನಲ್ಲಿ ಕನ್ನಡದ ವಾತಾವರಣವನ್ನು ನಿರ್ಮಿಸುವ ಕೆಲಸ ಮಾಡುತ್ತದೆ. ನಮ್ಮ ಸಂಭ್ರಮದ ಜತೆಗೆ ಪರಭಾಷಿಗರಿಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸವೂ ಆಗುತ್ತದೆ. ಕನ್ನಡಿಗರ ಸಂಭ್ರಮವನ್ನು ನೋಡಿ ಸಹಿಸಿಕೊಳ್ಳಲು ಆಗದ ವಲಸಿಗರ ಕುತಂತ್ರಗಳು ಬೇರೆ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿವೆ. ಪೊಲೀಸ್ ಇಲಾಖೆಗೆ ದೂರು ಕೊಟ್ಟವರೂ ಇಂಥವರೇ ಇರಬೇಕು.
ಹಿಂದೆ ೨೦೦೯ರಲ್ಲಿ ತಲೆ ಕೆಟ್ಟ ಅಧಿಕಾರಿಗಳ ಮಾತು ಕೇಳಿಕೊಂಡು ಸರ್ಕಾರಿ ಕಚೇರಿಗಳ ಮೇಲೆ ಕನ್ನಡ ಬಾವುಟ ಹಾರಿಸುವಂತಿಲ್ಲ ಎಂಬ ಆದೇಶವೊಂದನ್ನು ರಾಜ್ಯ ಸರ್ಕಾರ ಹೊರಡಿಸಿತ್ತು. ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಯಾವುದೇ ಬಾವುಟವನ್ನು ಹಾರಿಸಬಾರದು ಎಂಬುದು ಕೇಂದ್ರ ಸರ್ಕಾರದ ನಿಯಮ. ಹಾಗೆಂದು ಬೇರೆ ಧ್ವಜಗಳನ್ನು ಹಾರಿಸಲೇಬಾರದು ಎಂದರೆ ಹೇಗೆ? ಸರ್ಕಾರದ ಈ ಆದೇಶದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಇತರ ಕನ್ನಡ ಸಂಘಟನೆಗಳು ತೀವ್ರವಾಗಿ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಆ ಆದೇಶವನ್ನು ಹಿಂದಕ್ಕೆ ಪಡೆಯಿತು. ಇದಾದ ನಂತರ ೨೦೧೨ರಲ್ಲಿ ರಾಜ್ಯ ಉಚ್ಛ ನ್ಯಾಯಾಲಯವೂ ಕೂಡ ಕನ್ನಡ ಧ್ವಜಕ್ಕೆ ಅಧಿಕೃತ ಮಾನ್ಯತೆ ಇಲ್ಲದೇ ಇರುವುದರಿಂದ ಅದನ್ನು ಹಾರಿಸುವಂತಿಲ್ಲ ಎಂದು ಆದೇಶ ನೀಡಿತ್ತು.
ಇದೆಲ್ಲವೂ ಏನನ್ನು ಸೂಚಿಸುತ್ತದೆ? ಭಾರತ ಒಕ್ಕೂಟದಲ್ಲಿ ಕರ್ನಾಟಕವು ಒಂದು ರಾಜ್ಯವಾಗಿ ಸೇರಿಕೊಂಡಿದ್ದೇ ದೊಡ್ಡ ತಪ್ಪಾಗಿ ಹೋಯಿತೆ? ಸ್ವಾತಂತ್ರ್ಯಾನಂತರ ಕರ್ನಾಟಕವೇ ಪ್ರತ್ಯೇಕ ರಾಷ್ಟ್ರವಾಗಿ ಉಳಿದುಕೊಳ್ಳಬೇಕಿತ್ತೇ? ನಮ್ಮ ನಾಡಿಗೊಂದು ಬಾವುಟ, ಅದಕ್ಕೊಂದು ಆಚರಣೆ ಇಲ್ಲವೆಂದಮೇಲೆ ಆತ್ಮಗೌರವವನ್ನು ಕಳೆದುಕೊಂಡು ನಾವು ಈ ಒಕ್ಕೂಟದ ಭಾಗವಾಗಿ ಇರಬೇಕೆ?
ನಾವು ಭಾರತ ಒಕ್ಕೂಟದ ಒಂದು ಭಾಗವಾಗಿದ್ದೇವೆ ಎಂಬುದು ನಿಜ. ಹಾಗೆಂದ ಮಾತ್ರಕ್ಕೆ ನಮ್ಮ ನುಡಿ, ಸಂಸ್ಕೃತಿ, ಪರಂಪರೆ, ಆಚರಣೆ, ಅಸ್ಮಿತೆ ಎಲ್ಲವನ್ನೂ ಕಳೆದುಕೊಂಡು ಬದುಕಬೇಕೆ? ಈ ನಾಡಿನ ಒಬ್ಬ ಸಣ್ಣ ಮಗುವಿಗೂ ಕನ್ನಡ ಬಾವುಟದ ಪರಿಚಯವಿದೆ. ಹಾಗಿರುವಾಗ ಬಾವುಟಕ್ಕೆ ಮಾನ್ಯತೆ ಇಲ್ಲ, ಯಾರೂ ಹಾರಿಸುವಂತಿಲ್ಲ ಎಂದು ಎಸಿ ಕೊಠಡಿಗಳಲ್ಲಿ ಕುಳಿತುಕೊಂಡ ಯಾವುದೋ ರಾಜ್ಯದಿಂದ ಬಂದ ನ್ಯಾಯಾಧೀಶರುಗಳು ಅಪ್ಪಣೆ ಹೊರಡಿಸಿದರೆ ಅದನ್ನು ನಾವು ಪರಿಪಾಲಿಸಬೇಕೆ?
ಕರ್ನಾಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೊರ ರಾಜ್ಯಗಳ ಅಧಿಕಾರಿಗಳು, ಉದ್ಯಮಿಗಳು, ಎಲ್ಲ ಕ್ಷೇತ್ರದವರು ಮೊದಲು ಕನ್ನಡ ಕಲಿಯಬೇಕು, ಕನ್ನಡದಲ್ಲಿ ಸಂವಹನ ನಡೆಸಬೇಕು, ಕನ್ನಡದಲ್ಲೇ ಆಡಳಿತ ನಡೆಸಬೇಕು. ಮಾತ್ರವಲ್ಲ, ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಗೌರವಿಸುವುದನ್ನು ಕಲಿಯಬೇಕು. ಇತರೆ ರಾಜ್ಯಗಳಿಂದ ಬರುವವರು ಸಹನಾಶೀಲರಾಗಿರಬೇಕು, ಈ ದೇಶದ ಬಹುತ್ವ ಸಂಸ್ಕೃತಿಯ ಕುರಿತು ಗೌರವ ಹೊಂದಿರುವವರಾಗಿರಬೇಕು. ಇನ್ನೊಂದು ರಾಜ್ಯದಲ್ಲಿ ಕೆಲಸ ಮಾಡುವಾಗ ಆ ರಾಜ್ಯದ ನುಡಿ-ಸಂಸ್ಕೃತಿಯನ್ನು ಅರಿತು, ಅಲ್ಲಿನ ಜನರ ಜತೆ ಭಾವನಾತ್ಮಕವಾಗಿಯೂ ಬೆಸೆದುಕೊಳ್ಳಬೇಕು. ಬೆಂಗಳೂರು ಪೊಲೀಸ್ ಕಮಿಷನರ್ ಮೇಘರಿಕ್ ಅವರೇನೋ ಆಗಿರುವ ಪ್ರಮಾದವನ್ನು ತಿದ್ದಿಕೊಂಡರು. ಆದರೆ ಹಲವು ದಪ್ಪಚರ್ಮದ ಪರಭಾಷಿಕ ಅಧಿಕಾರಿಗಳು ಈಗಲೂ ಕನ್ನಡ ನುಡಿ-ಸಂಸ್ಕೃತಿಯನ್ನು ಧಿಕ್ಕರಿಸಿ ಆಡಳಿತ ನಡೆಸುತ್ತಿದ್ದಾರೆ. ಇಂಥವರು ಬೇಗ ತಮ್ಮ ತಪ್ಪನ್ನು ತಿದ್ದಿಕೊಳ್ಳದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ ಹೊರರಾಜ್ಯಗಳ ಅಧಿಕಾರಿಗಳನ್ನು ಅವರವರ ರಾಜ್ಯಗಳಿಗೇ ವಾಪಾಸ್ ಕಳಿಸಿ ಎಂಬ ಜನಾಂದೋಲನವನ್ನು ಹಮ್ಮಿಕೊಳ್ಳಬೇಕಾಗುತ್ತದೆ.
-ಟಿ.ಎ.ನಾರಾಯಣಗೌಡ
ರಾಜ್ಯಾಧ್ಯಕ್ಷರು
ಕರ್ನಾಟಕ ರಕ್ಷಣಾ ವೇದಿಕೆ

No comments:
Post a Comment